ಇದು ಸುಮ್ಮನೆ ಬರೆದ ನ್ಯೂಸ್ ಸ್ಟೋರಿ
*ಕಬ್ಬನ್ ಪಾರ್ಕ್ ಇನ್ನೂ ಮತ್ತಷ್ಟು ಹೈಲೈಟ್*
ವೈವಿಧ್ಯಮಯ ಸಸ್ಯರಾಶಿಯನ್ನು ತನ್ನ ಮಡಿಲಲ್ಲಿ ತುಂಬಿಕೊಂಡು ಸದಾಕಾಲವೂ ಹಚ್ಚ ಹಸಿರಾಗಿ ಪರಿಸರ ಪ್ರೇಮಿಗಳ ಮನಸ್ಸಿಗೆ ಸಂತೋಷ ಉಣಬಡಿಸುವ ಸುಂದರವಾದ ತಾಣವೇ ಲಾರ್ಡ್ ಕಬ್ಬನ್ ರವರ ಪ್ರೀತಿಯ ಕಬ್ಬನ್ ಪಾರ್ಕ್.
ಸಿಲಿಕಾನ್ ಸಿಟಿ ಬೆಂಗಳೂರಿನ ಕಬ್ಬನ್ ಪಾರ್ಕ್ ಯಾರಿಗೆ ತಾನೇ ಗೊತ್ತಿಲ್ಲ, ಪರಿಸರ ಸ್ನೇಹಿಗಳನ್ನು ತಟ್ಟಂದು ಸೆಳೆಯುವ ಸುಂದರ ಉದ್ಯಾನವನಕ್ಕೆ ಇದೀಗ ವಿಭಿನ್ನ ತಳಿಯ ಬಿದಿರು ನಾಟಿ ಹೊಸ ಜೀವ ತುಂಬಲಿದೆ. ತೋಟಗಾರಿಕೆ ಇಲಾಖೆ ಹೀಗೊಂದು ನೂತನ ಪ್ರಯೋಗಕ್ಕೆ ಸಜ್ಜಾಗಿದೆ. ದೇಶ ವಿದೇಶಗಳಿಂದ ತಂದ ಬಣ್ಣ ಬಣ್ಣದ ಬಿದರಿನ ತಳಿಗಳು ಇನ್ನು ಪರಿಸರ ಪ್ರೇಮಿಗಳ ಮನಸೆಳೆಯಲಿದೆ. ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
*ಬಿದಿರಿನ ಕಲಾಕೃತಿ ಅನಾವರಣ*
ಕಬ್ಬನ್ ಪಾರ್ಕ್ ನಲ್ಲಿ ಮೊದಲು ಬಿದ್ದದ ಬಿದಿರಿನ ಮರಗಳಿಗೆ ಕಲಾವಿದರು ಕಲಾಕೃತಿಯ ಸ್ಪರ್ಶ ಒದಗಿಸುವ ಮೂಲಕ ಪಾರ್ಕ್ ನ ಸೌಂದರ್ಯವನ್ನು ಹೆಚ್ಚಿಸಲಾಗುತ್ತದೆ, ಈ ಕಲಾಕೃತಿಯ ಅನಾವರಣ ಆಗದಿದ್ದ ಸಮಯದಲ್ಲಿ ಬಿದಿರುಗಳನ್ನು ಭದ್ರಾವತಿ ಕಾಗದ ಕಾರ್ಖಾನೆಗೆ ನೀಡುವ ಚಿಂತನೆ ನಡೆಸಿದೆ. ಇವೆರಡೂ ಯೋಜನೆಗಳು ಫಲಿಸದಿದ್ದರೆ ಹರಾಜು ಹಾಕುವ ಇಂಗಿತವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

*ಕೇರಳಕ್ಕೆ ತಜ್ಞರ ಭೇಟಿ*
ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ನೇತೃತ್ವದ ತಂಡ ಒಂದು ಶೀಘ್ರದಲ್ಲಿಯೇ ಕೇರಳ ಕ್ಕೆ ಭೇಟಿ ನೀಡುವ ಮೂಲಕ ಹೊಸ ತಳಿಗಳ ಬಿದಿರುಗಳನ್ನು ನಾಟಿ ಮಾಡುವ ಹಲವು ಅರಣ್ಯ ಸಂಸ್ಥೆಗಳಿದ್ದು , ಭಾರತೀಯ ಬಿದಿರು ತಳಿಗಳ ಜೊತೆಗೆ ಬರ್ಮಾ, ಮಲೇಷಿಯಾ ಸೇರಿದಂತೆ ಹಲವಾರು ದೇಶದ ತಳಿಗಳು ಇಲ್ಲಿ ದೊರೆಯಲ್ಲಿದ್ದು ಇದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಬಿದಿರಿನ ತಳಿಗಳನ್ನು ತಜ್ಞರ ತಂಡ ಆಯ್ಕೆ ಮಾಡಲಿದೆ.
*ಕಲರ್ ಫುಲ್ ಬಿದಿರು*
ಕೇರಳದಲ್ಲಿ ಬಿದಿರು ವಿಭಿನ್ನ ಬಣ್ಣದಲ್ಲಿರುತ್ತದೆ.ಕಪ್ಪು,ಹಸಿರು ಮತ್ತು ಕಡು ಹಸಿರು ಬಣ್ಣದ ತಳಿಗಳು ದೊರೆಯುತ್ತದೆ.ಈ ಬಿದಿರಿನ ಬಣ್ಣ ಬಣ್ಣದ ಎಲೆಗಳು ಉದ್ಯಾನವನಕ್ಕೆ ಹೂಸದಾದ ರಂಗನು ತರಲಿದೆ.ಈ ಬಿದಿರುಗಳ ವಿಶೇಷ ಮೂರು ವರ್ಷಕ್ಕೆ 15 ರಿಂದ 20 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ.ಇವುಗಳಲ್ಲಿ 15 ರಿಂದ 40 ವರ್ಷಗಳವರೆಗೆ ಬಾಳುವ ತಳಿಗಳು ಇದೆ ಎಂಬುದು ವಿಶೇಷ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದರು.
Comments
Post a Comment